ಜುಲೈ ೬ - ಜುಲೈ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೭ನೇ ದಿನ(ಅಧಿಕ ವರ್ಷದಲ್ಲಿ ೧೮೮ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೮೮೫ - ಲೂಯಿ ಪಾಸ್ಚರ್ ಮೊದಲ ಬಾರಿಗೆ ರೇಬಿಸ್ ರೋಗದ ವಿರುದ್ಧ ತನ್ನ ಲಸಿಕೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ. ೧೮೯೨ - ದಾದಾಬಾಯ್ ನವ್ರೋಜಿ ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯರಾದರು. ೧೯೬೪ - ಮಾಲಾವಿ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಘೋಷಿಸಿತು. ೧೯೭೫ - ಕೊಮೊರೊಸ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಘೋಷಿಸಿತು. ೨೦೦೬ - ಚೀನ-ಭಾರತ ಯುದ್ಧದ ಸಮಯದಲ್ಲಿ ಮುಚ್ಚಲಾದ ಭಾರತ ಮತ್ತು ಚೀನದ ಮಧ್ಯದ ನಾಥುಲ ಮಾರ್ಗ ೪೪ ವರ್ಷಗಳ ನಂತರ ಮತ್ತೆ ತೆರೆವುಗೊಂಡಿತು. == ಜನನಗಳು == ೧೮೩೭ - ಆರ್.ಜಿ. ಭಂಡಾರ್ಕರ್, ಭಾರತದ ವಿದ್ವಾಂಸ. ೧೯೦೭ - ಫ್ರೀಡ ಕಾಹ್ಲೊ, ಮೆಕ್ಸಿಕೊದ ಚಿತ್ರಗಾರ್ತಿ. ೧೯೩೫ - ತೆನ್ಜಿಂಗ್ ಗ್ಯಾತ್ಸೊ, ೧೪ನೇ ದಲೈ ಲಾಮ. ೧೯೪೬ - ಜಾರ್ಜ್ ಡಬ್ಲ್ಯು. ಬುಷ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ. == ಮರಣಗಳು == ೧೮೫೪ - ಜಾರ್ಜ್ ಒಹ್ಮ್, ಜರ್ಮನಿಯ ಭೌತಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == ಕೊಮೊರೋಸ್ - ಸ್ವಾತಂತ್ರ್ಯ ದಿನ. ಮಾಲಾವಿ - ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ